ಈ ಬಾರಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕರ್ನಾಟಕ ವಿಶ್ವಕರ್ಮ ಜನಾಂಗದವರು ಭಾರತೀಯ ಜನತಾ ಪಾರ್ಟಿಗೆ ಮತ ನೀಡಿ,,,,, ಕೆ.ಚಂದ್ರಶೇಖರ್ ಆಚಾರಿ, ಬೆಂಗಳೂರು ದಕ್ಷಿಣ ಓಬಿಸಿ ಮಾಧ್ಯಮ ಸಂಚಾಲಕರು ಹಾಗು ಪಿ.ಎಂ ವಿಶ್ವಕರ್ಮ ಯೋಜನೆ ಸಂಚಾಲಕರು

ಭಾರತೀಯ ಜನತಾ ಪಾರ್ಟಿಯ ಕೆ.ಚಂದ್ರಶೇಖರ್ ಆಚಾರಿ, ಬೆಂಗಳೂರು ದಕ್ಷಿಣ ಓಬಿಸಿ ಮಾಧ್ಯಮ ಸಂಚಾಲಕರು ಹಾಗು ಪಿ.ಎಂ ವಿಶ್ವಕರ್ಮ ಯೋಜನೆ ಸಂಚಾಲಕರು ಅವರು ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರ ಜೊತೆಯಲ್ಲಿ ಸಭೆನು ಉದ್ದೇಶಿಸಿ ಮಾತನಾಡಿ “ಈ ಬಾರಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕರ್ನಾಟಕ ವಿಶ್ವಕರ್ಮ ಜನಾಂಗದವರು ಭಾರತೀಯ ಜನತಾ ಪಾರ್ಟಿಗೆ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ. ನಮ್ಮ ವಿಶ್ವಕರ್ಮ ಸಮಾಜವನ್ನು ಬೇರೆಯಾವುದೇ ರಾಜಕೀಯ ಪಕ್ಷ ಇಂದಿನವರೆಗೂ ಗುರುತಿಸಲಿಲ್ಲ. ಪ್ರಥಮ ಬಾರಿಗೆ ನಮ್ಮ ಸಮಾಜವನ್ನು ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ಯವರು ಗುರುತಿಸಿ, 15000 ಕೋಟಿ ಮೊತ್ತದ ವಿಶ್ವಕರ್ಮ ಯೋಜನೆಯನ್ನು ರೂಪಿಸಿ ನಮ್ಮ ಸಮಾಜದಲ್ಲಿ ವಂಶಪಾರಂಪರಿಕವಾಗಿ ಪಂಚ ಕಸುಬುಗಳು ಮಾಡುತ್ತಾ ಬಂದಿರುವಂತಹ ಎಲ್ಲಾ ನಮ್ಮ ಸಹೋದರ ಸಹೋದರಿಯರಿಗೆ ಈ ಯೋಜನೆಯ ಮೂಲಕ ಹಾರ್ದಿಕವಾಗಿ ನೆರವಾಗಿದ್ದಾರೆ. ಈ ಕಾರಣದಿಂದ ನಾವು ಒಮ್ಮತ ದಿಂದ ಈ ರಾಜ್ಯದ್ಯಂತ ಭಾರತೀಯ ಜನತಾ ಪಾರ್ಟಿಗೆ ಮತ ಹಾಕೋಣ . ಆದ್ದರಿಂದ ಮತ್ತೊಮ್ಮೆ ಈ ದೇಶಕ್ಕೆ ನರೇಂದ್ರ ಮೋದಿಜಿ ರವರಿಗೆ ಬೆಂಬಲ ಸೂಚಿಸೋಣ ಎಂದು ಅವರು ಹೇಳಿ ಮನವಿ ಮಾಡಿದ್ದಾರೆ.